Saturday 13 August 2011

ಕೆಸರು ಗದ್ದೆ ಒಲಂಪಿಕ್ಸ್....

ರಾಜ್ಯದಲ್ಲಿ ಕ್ರೀಡಾಜಿಲ್ಲೆ ಎಂದೇ ಕರೆಯಲ್ಪಡುವ ಕೊಡಗಿನಲ್ಲಿ ಜೂನ್ ನಿಂದ ಸೆಪ್ಟೆಂಬರ್ ತನಕ ತುಂಬಾ ಮಳೆ. ಕೊರೆಯುವ ಚಳಿ.
ಕೊಡಗಿನಲ್ಲಿ ಪುರಾತನ ಕಾಲದಿಂದಲೂ ಸಾಂಪ್ರದಾಯಿಕವಾಗಿ ಪ್ರತಿ ಗ್ರಾಮ ಗ್ರಾಮಗಳಲ್ಲಿ ಕೆಸರುಗದ್ದೆ  ಕ್ರೀಡಾಕೂಟ, ನಾಟಿ ಓಟದ ಸಂಪ್ರದಾಯವನ್ನು ಹಿರಿಯರು ಹುಟ್ಟು ಹಾಕಿದ್ದರು. ಇದರಲ್ಲಿ ವಿಜೇತರಿಗೆ ಬಹುಮಾನವಾಗಿ ಬಾಳೆಗೊನೆ, ತೆಂಗಿನಕಾಯಿ, ಗೊಬ್ಬರ ಚೀಲಗಳನ್ನು ನೀಡಲಾಗುತ್ತಿತ್ತು. ಈಗ ಅದೇ ಹೊಸ ರೂಪವನ್ನು ಪಡೆದು ಕೆಸರು ಗದ್ದೆ ಕ್ರೀಡೋತ್ಸವವಾಗಿ ಕೊಡಗಿನ ಅಲ್ಲಲ್ಲಿ ನಡೆಯುತ್ತದೆ.
ಪುಟ್ಟ ಮಕ್ಕಳಿಂದ ಹಿಡಿದು ಇಳಿವಯಸ್ಸಿನ ಪುರುಷರೂ, ಮಹಿಳೆಯರೂ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಈ ಕೆಸರುಗದ್ದೆ ಒಲಂಪಿಕ್ಸ್ ನ ವಿಶೇಷ. ಕೆಸರು ತುಂಬಿದ ಗದ್ದೆಯಲ್ಲಿ ಓಟದ ಸ್ಪರ್ಧೆ, ರಿಲೆ ಓಟ, ಹಗ್ಗ ಜಗ್ಗಾಟ, ವಾಲಿಬಾಲ್, ಫುಟ್ಬಾಲ್ ಮೊದಲಾದ ಸ್ಪರ್ಧೆಗಳು ನಡೆಯುತ್ತವೆ. ಕೆಸರಿನೋಕುಳಿಯಲ್ಲಿ  ಸ್ಪರ್ಧಾಳುಗಳು ಮಿಂದರೆ ನೋಡಲು ಬರುವ ಸಾರ್ವಜನಿಕರು ಮಳೆಯಲ್ಲಿ ನೆನೆದುಕೊಂಡೇ ಇವರಿಗೆ ಉತ್ತೇಜನ ನೀಡುತ್ತಾರೆ. ಕೊಡಗಿನ ಕೆಲವು ಕಡೆ ಈ ತರದ ಕ್ರೀಡಾಕೂಟ ನಡೆಯುತ್ತದೆ. ಈಗ ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಹಾಗೂ ಒಳ್ಳೆಯ ಬಹುಮಾನಗಳನ್ನು ಕೊಡಲಾಗುತ್ತದೆ.
1993ರಿಂದ ಕೊಡಗಿನ ಕಗ್ಗೋಡ್ಲುವಿನಲ್ಲಿ ಇದನ್ನು ರಾಜ್ಯ ಮಟ್ಟದ ಸ್ಪರ್ಧೆಯಾಗಿ ನಡೆಸಲಾಗುತ್ತದೆ. ಇದಕ್ಕೆ ಕ್ರೀಡಾ ಇಲಾಖೆ ಮತ್ತು ಹಲವು ಒಕ್ಕೂಟಗಳು ಪ್ರಾಯೋಜಕರಾಗಿದ್ದಾರೆ. ಹೀಗೆ ಹಲವು ವಿಶೇಷತೆಗಳೊಂದಿಗೆ ಈ ಕೆಸರಿನಾಟ ವರ್ಷದಿಂದ ವರ್ಷಕ್ಕೆ ಜನಮನ್ನಣೆ ಪಡೆಯುತ್ತಿದ್ದು, ಇದಕ್ಕೆ ಸರ್ಕಾರದ ಸ್ಪಂದನೆ ಅಗತ್ಯವಾಗಿ ಬೇಕಾಗಿದೆ.                           

Saturday 30 July 2011

ಹೂಗಿಡಗಳನ್ನು ಕಾಡುವ ಕಾಯಿಲೆಗಳು ಮತ್ತು ಕೀಟಗಳು
ಹೂ ಗಿಡಗಳು ಚೆನ್ನಾಗಿ ಬೆಳೆಯಬೇಕಾದರೆ ಅವುಗಳನ್ನು ಕಾಯಿಲೆಗಳಿಂದ ಮತ್ತು ಕೀಟಗಳಿಂದ ರಕ್ಷಿಸುವುದು ಮುಖ್ಯ . ಗಿಡಗಳಿಗೆ ಸಾಮಾನ್ಯವಾಗಿ ಬರುವ ಕೀಟಗಳೆಂದರೆ ಈ ಗ್ರೀನ್ ಹುಳಗಳು ಹಾಗೂ ಇದೆ ತರದ ಇನ್ನೊಂದು ಸಣ್ಣ ಹುಳು .




ಇವು ಬಕಾಸುರ ಜಾತಿಯ ಹುಳಗಳು . ಗಿಡದ ಎಲೆಗಳನ್ನು ತಿನ್ನುತ್ತಾ ಹೋಗುತ್ತವೆ . ನಾವು ಗಿಡಗಳನ್ನು ನೋಡದಿದ್ದರೆ ಒಂದು ದಿನದಲ್ಲಿ ಗಿಡದ ಎಲೆ ಪೂರ್ತಿ ಖಾಲಿಯಾಗುತ್ತದೆ . ಈ ಹುಳಗಳಿಗೆ matacid ಅಥವಾ ಬೇರೆ ಯಾವುದೇ insecticide ಸ್ಪ್ರೆಯ್ ಮಾಡಬೇಕು .ಈಗ ಪರಿಸರ ಪ್ರೇಮಿ ಸಾವಯವ ಸ್ಪ್ರೆಯ್ ಗಳು ಬಂದಿವೆ . ಇವುಗಳನ್ನು ಸ್ಪ್ರೆಯ್ ಮಾಡಿ ಗಿಡಗಳನ್ನು ರಕ್ಷಿಸಬೇಕು .
ಹಾಗೆಯೇ ಗಿಡಗಳನ್ನು ಕಾಡುವ ಇನ್ನೊಂದು ಕಾಯಿಲೆ ಎಂದರೆ ಬೂಸ್ಟು ರೋಗ . ಇದು fungus ನಿಂದ ಬರುತ್ತದೆ . ಈ ಕಾಯಿಲೆ ಬಂದರೆ ಗಿಡದ ಎಲೆಗಳೆಲ್ಲಾ ಬಿಳಿಯಾಗಿ ಕೊನೆಗೆ ಉದುರಿಹೋಗಿ ಗಿಡ ಸತ್ತು ಹೋಗುತ್ತದೆ . ಇದಕ್ಕೆ fungicide ಸ್ಪ್ರೆಯ್ (bevestine ಅಥವಾ ಬೇರೆ ಯಾವುದಾದರೂ) ಮಾಡಬೇಕು .

 

ಮಳೆಕಾಲದಲ್ಲಿ ಗಿಡಗಳಿಗೆ ಹಾನಿಮಾಡುವ ಕೀಟ ಗೊಣ್ಣೆಹುಳ (SNAIL ) . ಈ ಗೊಣ್ಣೆಹುಳಗಳು ಗಿಡದ ಎಳೆ ಚಿಗುರುಗಳನ್ನು ತಿನ್ನುತ್ತವೆ . ಇವಕ್ಕೆ ಯಾವ ಔಷಧಿಯೂ ನಾಟುವುದಿಲ್ಲ . ಬೆಳಗ್ಗೆ ಇವು ಅಷ್ಟಾಗಿ ಕಾಣುವುದಿಲ್ಲ . ರಾತ್ರಿಯಾದ ತಕ್ಷಣ ಹೊರಗೆ ಬರುತ್ತವೆ . ಆದ್ದರಿಂದ ರಾತ್ರಿ TOURCH ಬೆಳಕಲ್ಲಿ ಗಿಡಗಳನ್ನು ಗಮನಿಸಬೇಕು . ಜೊತೆಗೆ ಒಂದು ಗೆರಟೆಯಲ್ಲಿ ಕಲ್ಲುಪ್ಪನ್ನು ಇಟ್ಟುಕೊಳ್ಳಬೇಕು . ಗೊಣ್ಣೆಹುಳಗಳಿದ್ದರೆ ಅವುಗಳನ್ನು ತೆಗೆದು ಉಪ್ಪಿಗೆ ಹಾಕಬೇಕು . ಹುಳಗಳು ತಕ್ಷಣ ಸತ್ತುಹೋಗುತ್ತವೆ .
ಇನ್ನೂ ಗಿಡಗಳನ್ನು ಕಾಡುವ ಕೆಲವು ಕಾಯಿಲೆಗಳಿವೆ . ಅವುಗಳ ಬಗ್ಗೆ ಇನ್ನೊಂದು ಲೇಖನದಲ್ಲಿ ಬರೆಯುತ್ತೇನೆ .
ವಂದನೆಗಳು ..

Tuesday 19 July 2011

ನನ್ನ ಹೂತೋಟದ ಸುಂದರ ಹೂಗಳು...

ಗಜೀನಿಯ:






ಇದನ್ನು ಕುಂಡಗಳಲ್ಲಿ ಬೆಳೆಸ ಬಹುದು. ಇದು ಬೇಸಿಗೆಯಲ್ಲಿ ಚೆನ್ನಾಗಿ ಹೂ ಬಿಡುತ್ತದೆ. ಇದನ್ನು ನೇರವಾಗಿ ಬಿಸಿಲಿನಲ್ಲಿ ಇಡಬೇಕು.

ಅಸ್ತ್ರೋಮಾರಿಯ:

 

 

ಇದು ಚಳಿ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದು ootyಯಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದಕ್ಕೆ ಹದವಾದ ಬಿಸಿಲು ಸಾಕಾಗುತ್ತದೆ. ಇದಕ್ಕೆ ಸಾವಯವ ಗೊಬ್ಬರ ಸೂಕ್ತ.

ಜಿಂಜರ್ ಲಿಲ್ಲಿ:


 

 
ಇದನ್ನು ಹೂತೋಟದ ಒಂದು ಮೂಲೆಯಲ್ಲಿ ನೆಡುವುದು ಒಳ್ಳೆಯದು. ಯಾಕೆಂದರೆ ಇದು ಯಾಲಕ್ಕಿ ಗಿಡದ ತರ ಎತ್ತರವಾಗಿ ಮತ್ತು ಹೆಚ್ಚು ಜಾಗವನ್ನು ಆಕ್ರಮಿಸಿ ಬೆಳೆಯುತ್ತದೆ. ಇದಕ್ಕೆ ಹೆಚ್ಚು ಗೊಬ್ಬರದ ಅಗತ್ಯವಿಲ್ಲ.

ಇಂಪೇಶೆನ್ಸ್:


 

 

ಇದಕ್ಕೆ ಹೆಚ್ಚು ಬಿಸಿಲು ಬೇಕಾಗುವುದಿಲ್ಲ. ಬೆಳಗ್ಗಿನ ಅಥವಾ ಸಂಜೆಯ ಬಿಸಿಲು ಸಾಕಾಗುತ್ತದೆ. ಇದಕ್ಕೆ ಸೆಗಣಿ ಅಥವಾ ಸಾವಯವ ಗೊಬ್ಬರ ಸೂಕ್ತ.

ಅಜೇಲಿಯ:

 

 

ಇದನ್ನು ಕುಂಡಗಳಲ್ಲಿ ಬೆಳೆಸುವುದು ಹೆಚ್ಚು ಸೂಕ್ತ. ಇದಕ್ಕೆ 2 ದಿನಕ್ಕೊಮ್ಮೆ ನೀರು ಹಾಕಿದರೆ ಸಾಕು. ಇದಕ್ಕೆ ಹದವಾದ ಬಿಸಿಲು ಸಾಕಾಗುತ್ತದೆ. ಇದಕ್ಕೆ ಹೆಚ್ಚು ಗೊಬ್ಬರದ ಅಗತ್ಯವಿಲ್ಲ.


ಆರ್ಕಿಡ್:

 

 





ಇದು ಚೆನ್ನಾಗಿ ಬೆಳೆಯಲು ಬಿಸಿಯಾದ ವಾತಾವರಣ ಬೇಕು. ಇದನ್ನು ಕುಂಡಗಳಲ್ಲಿ ನೆಡುವಾಗ ಇದ್ದಿಲು, ಇಟ್ಟಿಗೆ ಚೂರು ಮತ್ತು ತೆಂಗಿನ ನಾರು ಮಾತ್ರ ಉಪಯೋಗಿಸಬೇಕು. ಇದಕ್ಕೆ ಮಣ್ಣಿನ ಅಗತ್ಯವಿರುವುದಲ್ಲ. ಇದಕ್ಕೆ ಗೊಬ್ಬರವನ್ನು ಸ್ಪ್ರೆಯ್ ಅಥವಾ ನೀರಿನ ರೂಪದಲ್ಲಿ ಕೊಡಬೇಕು.

ಗ್ರೌಂಡ್  ಆರ್ಕಿಡ್:

 

 

ಇದು ಮಣ್ಣಿನಲ್ಲಿ ಬೆಳೆಯುವ ಆರ್ಕಿಡ್. ಇದನ್ನು ಬೇರೆ ಗಿಡಗಳ ಹಾಗೆ ಬೆಳೆಸಬಹುದು. ಇದಕ್ಕೆ ಹೆಚ್ಚಿನ ಗೊಬ್ಬರದ ಅಗತ್ಯವಿಲ್ಲ.

ಟ್ಯೂಬರಸ್ ಬಿಗೋನಿಯ:

 

 

ಇದು ತುಂಬಾ ಮೃದುವಾದ ಕಾಂಡವನ್ನು ಹೊಂದಿರುತ್ತದೆ. ಇದು ಚಳಿ ಪ್ರದೇಶದಲ್ಲಿ ಚೆನ್ನಾಗಿ ಹೂಬಿಡುತ್ತದೆ. ಇದು ನೆರಳು ಪ್ರಿಯ ಗಿಡ.

ಬ್ರೊಮಲೈಡ್ :

 

 

ಇದು cactus ಜಾತಿಯ ಗಿಡ . ಇದಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ . ಇದು ಒಮ್ಮೆ ಹೂ ಬಿಟ್ಟರೆ ಇದರ ಹೂ 6 ತಿಂಗಳು ಇರುತ್ತದೆ .

ಇ- ಫೋರ್ಬಿಯ :

 


ಇದು cactus ಜಾತಿಯ ಗಿಡ .ಮುಳ್ಳಿನಿಂದ ಕೂಡಿರುತ್ತದೆ . ಇದನ್ನು ಚೆನ್ನಾಗಿ ಬಿಸಿಲಿರುವ ಜಾಗದಲ್ಲಿ ಇಡಬೇಕು . ಮಳೆ ಇದಕ್ಕೆ ಎಲರ್ಜಿ . ಇದಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ .

ಡ್ಯಾನ್ಸಿಂಗ್ ಡಾಲ್:

 

 

ಇದು ಹದ ಬಿಸಿಲನ್ನು ಬಯಸುತ್ತದೆ . ಇದು ಗಟ್ಟಿ ಕಾಂಡದ ಗಿಡ . ಇದಕ್ಕೆ NPK ಗೊಬ್ಬರ ಅಥವಾ ಸಾವಯವ ಗೊಬ್ಬರ ಸೂಕ್ತ .

ಫೋರ್ಚುಲೇಖ :

 

ಇದು ಮೃದು ಕಾಂಡವನ್ನು ಹೊಂದಿರುತ್ತದೆ. ಇದು ಹೆಚ್ಚು ಬಿಸಿಲನ್ನು ಮತ್ತು ನೀರನ್ನು ಬಯಸುತ್ತದೆ.

ಲಿಲ್ಲಿ :


 

 

ಇದು ಮಳೆಕಾಲದ ಆರಂಭದಲ್ಲಿ ಚೆನ್ನಾಗಿ ಹೂ ಬಿಡುತ್ತದೆ. ಇದಕ್ಕೆ ಹೆಚ್ಚು ಗೊಬ್ಬರದ ಅಗತ್ಯವಿಲ್ಲ.