Saturday 1 March 2014

ಕೊಡಗಿನ ಕಣ್ಸೆಳೆಯುವ ಮಳೆಕಾಲದ ಬೆಡಗಿಯರು

ಅಬ್ಬೀ  ಜಲಪಾತ:

     ಇದು ಮಡಿಕೇರಿಯಿಂದ 8 km ದೂರದಲ್ಲಿದೆ. ಇಲ್ಲಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲೂ ಕಾಡು ಹಾಗೂ ಕಾಫಿ ತೋಟಗಳಿವೆ. ವಾಹನ ಪಾರ್ಕಿಂಗ್ ನಿಂದ ಸ್ವಲ್ಪ ದೂರ ಕಾಫಿ ತೋಟದ ಒಳಗೆ ನೆಡೆಯುತ್ತಾ ಹೋದಾಗ ಅಬ್ಬೀ ಫಾಲ್ಸ್ ಸಿಗುತ್ತದೆ.ಇದು ತುಂಬಾ ಸುಂದರವಾದ ಜಲಪಾತ. ಇದನ್ನು ನೋಡಲೆಂದು ಇದರ ಮುಂಭಾಗದಲ್ಲಿ ತೂಗು ಸೇತುವೆ ನಿರ್ಮಿಸಿದ್ದಾರೆ. ಅಲ್ಲಿ ನೀರಿಗೆ ಇಳಿಯುವುದು ನಿಷಿದ್ಧ. ಅಬ್ಬಿ ಫಾಲ್ಸ್ ನ ತಳದಲ್ಲಿ ತುಂಬಾ ಆಳ ಹಾಗೂ ಸುಳಿಗಳಿವೆ. ಹಿಂದೆ ಅನೇಕ ಜನರು ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಈಗ ಕೆಲವು ವರ್ಷಗಳಿಂದ ಅಂತಹ ಅನಾಹುತಕ್ಕೆ ಆಸ್ಪದವಿಲ್ಲ. ಮಳೆಕಾಲದಲ್ಲಿ ಈ ಜಲಪಾತವನ್ನು ನೋಡುವುದೇ ಚಂದ. ತೂಗು ಸೇತುವೆಯವರೆಗೂ ನೀರ ಹನಿಗಳು ಎರಚುತ್ತವೆ. 

   
                   

ಇರ್ಪು ಫಾಲ್ಸ್ :               
     ಇದು ಮಡಿಕೇರಿಯಿಂದ 80 km ದೂರದಲ್ಲಿದೆ. ಸುಂದರವಾದ ನಿಸರ್ಗದ ಸೊಬಗನ್ನು ಸವಿಯುತ್ತಾ ಸ್ವಲ್ಪ  ದೂರ ಕಾಲ್ನಡಿಗೆಯಲ್ಲಿ ಹೋದರೆ ಇರ್ಪು ಫಾಲ್ಸ್ ಕಾಣಸಿಗುತ್ತದೆ.ಇದು ಲಕ್ಷ್ಮಣ ತೀರ್ಥ ನದಿಯ ಜಲಪಾತ. ಇಲ್ಲಿ ನೀರು 60 feet ಎತ್ತರದಿಂದ ಬೀಳುತ್ತದೆ. ಮಳೆಕಾಲದಲ್ಲಿ ಇದರ ಅಂದವೇ ಬೇರೆ. ಬೇಸಿಗೆಯಲ್ಲಿ ಹೋದರೆ ನೀರಲ್ಲಿ ಇಳಿದು ಬೇಕಷ್ಟು ಆಟವಾಡಬಹುದು ಜಲಪಾತದ ನೀರಿಗೆ ತಲೆಯೋಡ್ಡಬಹುದು. ಜಲಪಾತದ ಅಡಿಯಲ್ಲಿ ಆಳವಿಲ್ಲ. ಏಕೆಂದರೆ ನೀರು ಅಗಲವಾದ ಕಲ್ಲು ಬಂಡೆಯ ಮೇಲೆ ಬಿದ್ದು ಕೊಳದ ತರ ನಿರ್ಮಾಣವಾಗಿದೆ.      



ಚೇಲಾವರ ಫಾಲ್ಸ್ :
       ಇದು ಕೊಡಗಿನ ಇನ್ನೊಂದು ಸುಂದರ ಜಲಪಾತ ಇದು ಚೆಯ್ಯಂಡಾಣೆ ಎನ್ನುವ ಪ್ರದೇಶದ ಸಮೀಪದಲ್ಲಿದೆ. ಇದು ವಿರಾಜಪೇಟೆಯಿಂದ 16 km ದೂರದಲ್ಲಿದೆ. ಹಾಲ್ನೊರೆಯಂತೆ ಧುಮುಕುವ ಈ ಜಲಪಾತ ಎತ್ತರದಿಂದ ಬಿದ್ದು ಕಾಫಿ ತೋಟದ ಮಧ್ಯದಲ್ಲಿ ಹರಿದು ಹೋಗುತ್ತದೆ. ಈ ಜಲಪಾತವನ್ನು ಚೋಮಕುಂಡ ಎಂಬ ಬೆಟ್ಟದಿಂದಲೂ ವೀಕ್ಷಿಸ ಬಹುದು.  




ಇದಲ್ಲದೆ ಕುಮಾರಾಧಾರ ನದಿಯಲ್ಲಿ ಸೋಮವಾರಪೇಟೆ ಸಮೀಪ ಮಲ್ಲಳ್ಳಿ ಫಾಲ್ಸ್ ಇದೆ. ಇದು ಕೊಡಗಿನ ಇನ್ನೊಂದು ಪ್ರಮುಖ ಜಲಪಾತ.
  ಇದಲ್ಲದೆ ಮಳೆಕಾಲದಲ್ಲಿ ಹೆಸರಿಲ್ಲದ ಅನೇಕ ಸುಂದರ ಜಲಪಾತಗಳು ಕಾಣಸಿಗುತ್ತವೆ. ಭಾಗಮಂಡಲದಿಂದ ಕರಿಕೆ ಮಾರ್ಗದಲ್ಲಿ ಮಳೆಕಾಲದಲ್ಲಿ 34 ಸುಂದರವಾದ ಜಲಪಾತಗಳು ಕಾಣಸಿಗುತ್ತವೆ. ಇದನ್ನು ಕರೆಯುವುದೇ ಜಲಪಾತ ಮಾರ್ಗ ಎಂದು...   
  

10 comments:

  1. ಸವಿತಾ, ಟೈಟಲ್ ಆಕರ್ಷಣೀಯ!! ಹಾಗೆಯೇ ಬೆಡಗಿಯರ ಬಳುಕು ಬಿನ್ನಾಟ ನೋಡಲು ಬಹು ಸುಂದರ. ನಾನು ಇದುವರೆಗೂ ೨ ಬೆದಗಿಯರನ್ನು ಮಾತ್ರ ನೋಡಿರುವೆ!! ಅಬ್ಬಿ ಮತ್ತು ಇರ್ಪು. ಈ ಮಳೆಗಾಲದಲ್ಲಿ ಈ ಎಲ್ಲ ಬೆದಗಿಯರನ್ನು ನೋಡಿ ಕಣ್ಣುತುಂಬಿಸಿಕೊಳ್ಳುವಾಸೆ....!!

    ReplyDelete
    Replies
    1. ಥ್ಯಾಂಕ್ಸ್ .. ಖಂಡಿತಾ ಬನ್ನಿ

      Delete
    2. ಥ್ಯಾಂಕ್ಸ್ .. ಖಂಡಿತಾ ಬನ್ನಿ

      Delete
  2. ಜಲಪಾತ ಮಾರ್ಗ ಕ್ಕೆ ಒಮ್ಮೆ ಬೀಟಿ ನೀಡಲೇ ಬೇಕು.....

    ReplyDelete
  3. ನಾನು ಮಡಿಕೇರಿ ಫಾಲ್ಸ್ ನೊಡಿ ತುಂಬಾನೆ ಖುಷಿಆಗಿದೆ.ಅಕ್ಕಾ

    ReplyDelete
  4. ತುಂಬಾ ಕುಶಿಯಾಯ್ತು..
    ನಾನು ಈ ವರೆಗೂ ಈ ಜಲಪಾತಗಳನ್ನು ನೋಡಿಲ್ಲ..ನಿಮ್ಮ ಮಾಹಿತಿ ಹಾಗು ಸುಂದರ ಫೋಟೋಗಳನ್ನು ನೋಡಿದ ಮೇಲೆ ಈ ಏಪ್ರಿಲ್ ನಲ್ಲಿ ಎಲ್ಲ ಜಲಪಾತ ನೋಡಲು ನಿರ್ದರಿಸಿದ್ದೆನೆ..ನಿಮ್ಮ ಸುಂದರ ಬರಹಕ್ಕೆ ಅಭಿನಂದನೆಗಳು

    ReplyDelete
    Replies
    1. ಥ್ಯಾಂಕ್ಸ್ ಅಣ್ಣ

      Delete
  5. Giri Bagali
    Hi Savi, very well information.

    ReplyDelete
  6. ಥ್ಯಾಂಕ್ಸ್ ಗಿರಿ :)

    ReplyDelete