Saturday 1 March 2014

ಕೊಡಗಿನ ಮಿನುಗುವ GOLDEN TEMPLE

ಇದು ಮಡಿಕೇರಿಯಿಂದ 36kms ಹಾಗೂ ಕುಶಾಲನಗರದಿಂದ 6kms ದೂರದ ಬೈಲುಕುಪ್ಪೆಎಂಬಲ್ಲಿ ಇದೆ. ಬೈಲುಕುಪ್ಪೆಯಲ್ಲಿ Tibetans Camp ಇದೆ. 50 ವರ್ಷಗಳ ಹಿಂದೆ ಚೀನಾದವರು Tibetಅನ್ನು ಆಕ್ರಮಿಸಿದಮೇಲೆ ನಿರಾಶ್ರಿತರಾದ ಟಿಬೇಟಿಯನ್ನರು ಭಾರತಕ್ಕೆ ಬಂದರು. ಸರಕಾರ ಅವರಿಗೆ ಕುಶಾಲನಗರದ ಸಮೀಪದ ಬೈಲುಕುಪ್ಪೆಎಂಬಲ್ಲಿ ಜಾಗವನ್ನು ನೀಡಿತ್ತು. ಶ್ರಮಜೀವಿಗಳಾದ ಟಿಬೇಟಿಯನ್ನರು ಕೃಷಿ ಮಾಡುತ್ತಾ, ಹೆಂಗಸರು woolen sweater ಹಣೆದು ಮಾರಾಟ ಮಾಡುತ್ತಾ ಬದುಕುತ್ತಿದ್ದರು. ಇವರ ಶ್ರಮದಿಂದಾಗಿ ಇವರು ತುಂಬಾ ಅಭಿವೃದ್ದಿ ಹೊಂದಿದರು. ಅನೇಕ ಕಡೆ ಸ್ಥಳೀಯರ ಜಮೀನನ್ನು ಖರೀದಿಸಿದರು.

ಇವರು ಬೌದ್ಧ ಧರ್ಮದ ಅನುಯಾಯಿಗಳು. ಇವರ ಜನಸಂಖ್ಯೆ ಸುಮಾರು 11000. ಇವರು ಬೈಲುಕುಪ್ಪೆಗೆ ಬಂದಾಗ ಸಣ್ಣದಾಗಿ ಬುದ್ಧ ದೇವಾಲಯವನ್ನು ಕಟ್ಟಿಕೊಂಡಿದ್ದರು. ನಂತರ ಇವರು 1999 ಅಲ್ಲಿ ಭವ್ಯವಾದ GOLDEN TEMPLE ಅನ್ನು ನಿರ್ಮಿಸಿದರು. ಪ್ರತಿ ವರ್ಷ ಅದನ್ನು ಅಭಿವೃದ್ಧಿಪಡಿಸುತ್ತಾ ಬಂದು ಮತ್ತೆರಡು ದೇವಾಲಯ ಹಾಗೂ ಸುಂದರವಾದ ಉದ್ಯಾನವನವನ್ನು ನಿರ್ಮಿಸಿದರು. ಈಗ ಈ Golden Temple ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ಇದರ ಸುತ್ತ ಮುತ್ತ ಪ್ರಶಾಂತವಾದ ವಾತಾವರಣವಿದ್ದು, ಪಾರಿವಾಳ, ಬಾತುಕೋಳಿ ಮುಂತಾದ ಪಕ್ಷಿಗಳು ಹಸಿರು ಹುಲ್ಲುಹಾಸಿನಲ್ಲಿ ವಿಹರಿಸುತ್ತವೆ.


ಈ ಬೌದ್ಧ ದೇವಾಲಯದ ಒಳಗೆ ಪ್ರವೇಶಿಸಿದಾಗ ಬೇರೆಯೇ ಲೋಕಕ್ಕೆ ಹೋದಂತೆ ಅನಿಸುತ್ತದೆ. ಅಲ್ಲಿ 3 ಸುಂದರವಾದ ವಿಗ್ರಹಗಳಿವೆ. ಇವುಗಳು ಪದ್ಮಸಂಭವ, ಬುದ್ಧ ಮತ್ತು ಅಮಿತಾಯುಸ್ ನವರದ್ದಾಗಿವೆ. ಮಧ್ಯದಲ್ಲಿ ಇರುವ ಬುದ್ಧನ ವಿಗ್ರಹವು 60ft ಎತ್ತರವಿದೆ. ಬೇರೆರಡು ವಿಗ್ರಹಗಳು 58ft ಎತ್ತರವಿದೆ. ಈ ಮೂರು ವಿಗ್ರಹಗಳನ್ನು Pure Goldsheet ಗಳಿಂದ ನಿರ್ಮಿಸಲಾಗಿದೆ. ಈ ಮೂರ್ತಿಗಳ ಪಕ್ಕದ ಸ್ಥಳವನ್ನು plastic ಹೂಗಳು ಹಾಗೂ candle ನಿಂದ ಅಲಂಕರಿಸಲಾಗಿದೆ. ದೇವಾಲಯದ ಗೋಡೆಗಳಲ್ಲಿ ಸುಂದರವಾದ paintings ಗಳಿವೆ. ಇಲ್ಲಿಗೆ ವರ್ಷಕ್ಕೆ ಒಮ್ಮೆ ಅವರ ಗುರು Dalai Lama ಬರುತ್ತಾರೆ. ಇದು ದಕ್ಷಿಣ ಭಾರತದ ಪ್ರಸಿದ್ದ ಬೌದ್ಧ ದೇವಾಲಯವಾಗಿದೆ. ದೇವಾಲಯದ ಹೊರಗೆ ಒಳಗೆ ಎಲ್ಲಿ ಬೇಕಾದರೂ Photo ತೆಗೆಯಬಹುದು. ಇದರ ಸಮೀಪದಲ್ಲಿ ಚಿಕ್ಕ Shopping Center ಇದೆ. ಅಲ್ಲಿ ಸುಂದರವಾದ ಟಿಬೇಟಿಯನ್ ವಸ್ತುಗಳು ಸಿಗುತ್ತವೆ. ಎಲ್ಲಾ ಪ್ರವಾಸಿಗರೂ ತುಂಬಾ ಇಷ್ಟ ಪಡುವ ತಾಣ ಈ Golden Temple.

golden temple ವಿಶಾಲವಾಗಿದೆ. ಅದರ ಕಂಬಗಳಲ್ಲಿ ಹಾಗೂ ಗೋಡೆಗಳಲ್ಲಿ ಸುಂದರವಾದ paintingsಗಳಿವೆ.ಅದರಒಳಗೆ ಪ್ರವೇಶಿಸಿದಾಗ ಪ್ರಶಾಂತತೆಯ ಆನಂದ ಅನುಭವಕ್ಕೆ ಬರುತ್ತದೆ. ದೇವಾಲಯದ ಸುತ್ತಲೂ ಸುಂದರವಾದ ಹುಲ್ಲು ಹಾಸು ಇದೆ. ಹುಲ್ಲು ಹಾಸೀನ ಸುತ್ತಲೂ ಗಿಡಮರಗಳನ್ನು ನೆಟ್ಟಿದ್ದು ಅದರಲ್ಲಿಯೂ ಹಕ್ಕಿಗಳ ಚಿಲಿಪಿಲಿ ಕೇಳಿಬರುತ್ತದೆ.ಅಲ್ಲಿ ಅದ್ಭುತವಾದ 8 ಗಂಧದ ಮರಗಳಿವೆ. 5 ಅಡಿ ಸುತ್ತಳತೆಯ ಈ ಮರಗಳನ್ನು ದೇವಾಲಯದ ಬಳಿ ಕಾಣಬಹುದು. ಅಲ್ಲೇ ಪಕ್ಕದಲ್ಲಿ ಟಿಬೇಟಿಯನ್ ವಿಶ್ವವಿದ್ಯಾನಿಲಯವಿದೆ.

ಈ ಟಿಬೇಟಿಯನ್ನರು ಭಾರತದ ಪ್ರಜೆಗಳಲ್ಲ. ಅವರಿಗೆ ಚುನಾವಣೆಗೆ ನಿಲ್ಲುವ ಹಾಗೂ ಮತದಾನದ ಹಕ್ಕಿಲ್ಲ. ಅವರಿಗೆ ಭಾರತ ಸರ್ಕಾರ STAY CERTIFICATE ಕೊಟ್ಟಿದೆ. ಅದನ್ನು ಅವರು ಪ್ರತಿ ವರ್ಷ renewal ಮಾಡಿಸಬೇಕು. ಹಾಗೆಯೇ ಅವರ identity ಗಾಗಿ YELLOW BOOK ಕೊಟ್ಟಿದೆ. ವಿದೇಶಕ್ಕೆ ಹೋಗಲು passport ಇತ್ಯಾದಿಗಳಿಗಾಗಿ ಇದನ್ನು ಉಪಯೋಗಿಸಬಹುದು.
ಟಿಬೇಟಿಯನ್ನರು ನಾಲ್ಕು ಪಂಗಡಗಳಾಗಿ ವಿಭಜನೆ ಹೊಂದಿದ್ದಾರೆ. ಕೊಡಗಿಗೆ ಜೋಳ ಬೆಳೆಯುವುದನ್ನು ಪ್ರಥಮ ಬಾರಿಗೆ ಪರಿಚಯಿಸಿದ್ದು ಇವರೇ ಎಂಬ ಪ್ರತೀತಿ. ಬಂದ ಶುರುವಿನಲ್ಲಿ ಇವರಲ್ಲಿ ದುಡ್ಡಿರಲ್ಲಿಲ್ಲ. ಆಗ ಅವರು ಅಗತ್ಯ ವಸ್ತು ಖರೀದಿಗೆ ಚಿನ್ನದ ನಾಣ್ಯವನ್ನು ವಿನಿಮಯ ಮಾಡುಕೊಳ್ಳುತ್ತಿದ್ದರು. Important electronic item ಗಳ sale ಇಲ್ಲಿ ಪ್ರಸಿದ್ಧ. ಇದು ಪ್ರತಿ ಗುರುವಾರ ನಡೆಯುತ್ತದೆ. 





1 comment:

  1. So beautiful Savitha... I didn't know about this temple. Hw did u collect these info... ? Very useful detsils, pictures

    ReplyDelete