Friday 28 February 2014

ಮನಸೆಳೆಯುವ ಮಡಿಕೇರಿಯ ಮಾಂದಲ್ ಪಟ್ಟಿ

ಮಾಂದಲ್ ಪಟ್ಟಿಯಿಂದ ಕಾಣುವ ಪ್ರಕೃತಿ ಸೌಂದರ್ಯ ವರ್ಣಿಸಲಸಾಧ್ಯ. ಅಲ್ಲಿ ಆಕಾಶವು ಭೂಮಿಯನ್ನು ಚುಂಬಿಸುವಂತೆ ಕಾಣುತ್ತದೆ. ಇದು ಸಮುದ್ರ ಮಟ್ಟದಿಂದ 5000ft ಎತ್ತರದಲ್ಲಿದೆ.ಹಾಗಾಗಿ ತಂಪು ಗಾಳಿ ಯಾವಾಗಲೂ ಬೀಸುತ್ತಿರುತ್ತದೆ. ಅಲ್ಲಿರುವ ಸಣ್ಣ ಬೆಟ್ಟವನ್ನು ಹತ್ತಿ ಮುಂದೆ ಕಾಣುವ ನಿಸರ್ಗ ಸೌಂದರ್ಯವನ್ನು ನೋಡುವುದೇ ಅದ್ಭುತ ಅನುಭವ. ಅಲ್ಲಿಂದ ಗಗನವನ್ನು ಚುಂಬಿಸುವಂತೆ ಕಾಣುವ ಪುಷ್ಪಗಿರಿ ಬೆಟ್ಟದ ಸಾಲುಗಳು ಮತ್ತು ಕೋಟೆ ಬೆಟ್ಟವನ್ನು ಕಾಣಬಹುದು. ಅಲ್ಲಿ ಮಂಜಿನ ಮೋಡಗಳು ಬಂದು ಹೋಗುತ್ತಿರುತ್ತವೆ. ಸೂರ್ಯನ ಬೆಳಕಿಗೆ ಅನುಗುಣವಾಗಿಯೇ ಬೆಟ್ಟಗುಡ್ಡಗಳು ಬಣ್ಣ ಬದಲಾಯಿಸಿದಂತೆ ಕಾಣುತ್ತದೆ. ಸಂಜೆ ನಾಲ್ಕು ಗಂಟೆಯಾಗುತ್ತಿದಂತೆ ಅಲ್ಲಿ ಮಂಜು ಮುಚ್ಚುತ್ತದೆ.ಅಲ್ಲಿ ಅನೇಕ ಸಣ್ಣ ಸಣ್ಣ ಬೆಟ್ಟಗಳಿವೆ. ಅವನ್ನೆಲ್ಲ ಹತ್ತ ಬಹುದು. ಅಲ್ಲಿನ ಸೌಂದರ್ಯವನ್ನು ನೋಡುತ್ತಿದ್ದರೆ ಅಲ್ಲಿಂದ ಬರಲು ಮನಸ್ಸೇ ಬರುವುದಿಲ್ಲ.  

ಇದು ಮಡಿಕೇರಿಯಿಂದ 20 ಕಿ.ಮೀ. ದೂರದಲ್ಲಿದೆ . ಅಲ್ಲಿಗೆ ಹೋಗುವ ರಸ್ತೆ ಚೆನ್ನಾಗಿಲ್ಲ. ಇದು ಪುಷ್ಪಗಿರಿ ವನ್ಯ ಜೀವಿ ರಕ್ಷಿತಾರಣ್ಯ .ಇದು ಅರಣ್ಯ ಇಲಾಖೆಯ ಆಧೀನದಲ್ಲಿದೆ.ಹಾಗಾಗಿ ಅಲ್ಲಿಗೆ ಯಾವುದೇ ಬಸ್ಸು ಸೌಕರ್ಯ ಇಲ್ಲ. ಅಲ್ಲಿಗೆ ಜೀಪ್ ನಲ್ಲಿ ಹೋಗುವುದು ಉತ್ತಮ. ಮಡಿಕೇರಿಯಲ್ಲಿ ಜೀಪ್ ಬಾಡಿಗೆಗೆ ದೊರೆಯುತ್ತದೆ. ಅದು ರಕ್ಷಿತಾರಣ್ಯವಾದ ಕಾರಣ ಅಲ್ಲಿ ಯಾವುದೇ ಹೊಟೇಲ್ ಗಳಿಲ್ಲ. ಆಹಾರವನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಉತ್ತಮ. ಇಲ್ಲಿಗೆ ಹೋಗಲು ಸರಿಯಾದ ಸಮಯವೆಂದರೆ OCT to MAY. ಮಳೆಕಾಲದಲ್ಲಿ ಹೋಗಲು ಕಷ್ಟ.

ಆದರೆ ಬೇಸರದ ವಿಷಯವೆಂದರೆ ಬಂದ ಪ್ರವಾಸಿಗರು ಎಲ್ಲೆಂದರಲ್ಲಿ ನೀರಿನ ಬಾಟಲಿಗಳನ್ನು ಮತ್ತು ಪ್ಲಾಸ್ಟಿಕ್ ಕವರ್ ಗಳನ್ನು ಎಸೆದಿದ್ದಾರೆ. ಹೀಗೆ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವುದು ವಿಷಾದನೀಯ.