Friday 28 February 2014

ಮನಸೆಳೆಯುವ ಮಡಿಕೇರಿಯ ಮಾಂದಲ್ ಪಟ್ಟಿ

ಮಾಂದಲ್ ಪಟ್ಟಿಯಿಂದ ಕಾಣುವ ಪ್ರಕೃತಿ ಸೌಂದರ್ಯ ವರ್ಣಿಸಲಸಾಧ್ಯ. ಅಲ್ಲಿ ಆಕಾಶವು ಭೂಮಿಯನ್ನು ಚುಂಬಿಸುವಂತೆ ಕಾಣುತ್ತದೆ. ಇದು ಸಮುದ್ರ ಮಟ್ಟದಿಂದ 5000ft ಎತ್ತರದಲ್ಲಿದೆ.ಹಾಗಾಗಿ ತಂಪು ಗಾಳಿ ಯಾವಾಗಲೂ ಬೀಸುತ್ತಿರುತ್ತದೆ. ಅಲ್ಲಿರುವ ಸಣ್ಣ ಬೆಟ್ಟವನ್ನು ಹತ್ತಿ ಮುಂದೆ ಕಾಣುವ ನಿಸರ್ಗ ಸೌಂದರ್ಯವನ್ನು ನೋಡುವುದೇ ಅದ್ಭುತ ಅನುಭವ. ಅಲ್ಲಿಂದ ಗಗನವನ್ನು ಚುಂಬಿಸುವಂತೆ ಕಾಣುವ ಪುಷ್ಪಗಿರಿ ಬೆಟ್ಟದ ಸಾಲುಗಳು ಮತ್ತು ಕೋಟೆ ಬೆಟ್ಟವನ್ನು ಕಾಣಬಹುದು. ಅಲ್ಲಿ ಮಂಜಿನ ಮೋಡಗಳು ಬಂದು ಹೋಗುತ್ತಿರುತ್ತವೆ. ಸೂರ್ಯನ ಬೆಳಕಿಗೆ ಅನುಗುಣವಾಗಿಯೇ ಬೆಟ್ಟಗುಡ್ಡಗಳು ಬಣ್ಣ ಬದಲಾಯಿಸಿದಂತೆ ಕಾಣುತ್ತದೆ. ಸಂಜೆ ನಾಲ್ಕು ಗಂಟೆಯಾಗುತ್ತಿದಂತೆ ಅಲ್ಲಿ ಮಂಜು ಮುಚ್ಚುತ್ತದೆ.ಅಲ್ಲಿ ಅನೇಕ ಸಣ್ಣ ಸಣ್ಣ ಬೆಟ್ಟಗಳಿವೆ. ಅವನ್ನೆಲ್ಲ ಹತ್ತ ಬಹುದು. ಅಲ್ಲಿನ ಸೌಂದರ್ಯವನ್ನು ನೋಡುತ್ತಿದ್ದರೆ ಅಲ್ಲಿಂದ ಬರಲು ಮನಸ್ಸೇ ಬರುವುದಿಲ್ಲ.  

ಇದು ಮಡಿಕೇರಿಯಿಂದ 20 ಕಿ.ಮೀ. ದೂರದಲ್ಲಿದೆ . ಅಲ್ಲಿಗೆ ಹೋಗುವ ರಸ್ತೆ ಚೆನ್ನಾಗಿಲ್ಲ. ಇದು ಪುಷ್ಪಗಿರಿ ವನ್ಯ ಜೀವಿ ರಕ್ಷಿತಾರಣ್ಯ .ಇದು ಅರಣ್ಯ ಇಲಾಖೆಯ ಆಧೀನದಲ್ಲಿದೆ.ಹಾಗಾಗಿ ಅಲ್ಲಿಗೆ ಯಾವುದೇ ಬಸ್ಸು ಸೌಕರ್ಯ ಇಲ್ಲ. ಅಲ್ಲಿಗೆ ಜೀಪ್ ನಲ್ಲಿ ಹೋಗುವುದು ಉತ್ತಮ. ಮಡಿಕೇರಿಯಲ್ಲಿ ಜೀಪ್ ಬಾಡಿಗೆಗೆ ದೊರೆಯುತ್ತದೆ. ಅದು ರಕ್ಷಿತಾರಣ್ಯವಾದ ಕಾರಣ ಅಲ್ಲಿ ಯಾವುದೇ ಹೊಟೇಲ್ ಗಳಿಲ್ಲ. ಆಹಾರವನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಉತ್ತಮ. ಇಲ್ಲಿಗೆ ಹೋಗಲು ಸರಿಯಾದ ಸಮಯವೆಂದರೆ OCT to MAY. ಮಳೆಕಾಲದಲ್ಲಿ ಹೋಗಲು ಕಷ್ಟ.

ಆದರೆ ಬೇಸರದ ವಿಷಯವೆಂದರೆ ಬಂದ ಪ್ರವಾಸಿಗರು ಎಲ್ಲೆಂದರಲ್ಲಿ ನೀರಿನ ಬಾಟಲಿಗಳನ್ನು ಮತ್ತು ಪ್ಲಾಸ್ಟಿಕ್ ಕವರ್ ಗಳನ್ನು ಎಸೆದಿದ್ದಾರೆ. ಹೀಗೆ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವುದು ವಿಷಾದನೀಯ. 






9 comments:

  1. ಸವೀ...
    ಮಾಂದಲ್ ಪಟ್ಟಿ ಕಿರು ಲೇಖನ ತುಂಬಾ ಸೊಗಸಾಗಿದೆ....
    ಲೇಖನಕ್ಕೆ ಪೂರಕವಾಗಿ ನೀಡಿರುವ ಚಿತ್ರಗಳು ಲೇಖನಕ್ಕೆ ಮೆರುಗು ನೀಡಿವೆ....
    ಚಿತ್ರಗಳನ್ನು ನೋಡುತ್ತಿದ್ದರೇ....
    ರಸವತ್ತಾದ ಕವಿತೆ ಪ್ರಕೃತಿಯಲ್ಲಿ ಹರಡಿದಂತೆ ಕಾಣಿಸುತ್ತದೆ.....

    ReplyDelete
    Replies
    1. ಥ್ಯಾಂಕ್ಸ್ ಗಂಗಾ ..

      Delete
  2. Illindale aakarshisuva lekhanagalu uttama kanamna tanisuva chitragalu nijakku shlaaghaniiya. Pravasodyama ilaakhe ginta uttama vaagi kodagannu parichayisalaagide. Abhinandanegalu Savitha. Inthaha Mattashtu lakhanagala niriksheyide.- Jeevan Shetty

    ReplyDelete
    Replies
    1. ಥ್ಯಾಂಕ್ಸ್ ಜೀವನ್ .. ಬಿಡುವು ಮಾಡಿಕೊಂಡು ಒಮ್ಮೆ ಭೇಟಿ ಕೊಡಿ ..

      Delete
  3. ನಿಜಕ್ಕೂ ಅತ್ಯಂತ ಮನೋಹರ ತಾಣ ಅನಿಸುತ್ತಿದೆ. ತಪ್ಪದೇ ಒಮ್ಮೆ ಬೇಟಿ ನೀಡುವೆ. ಲೇಖನ ಹಾಗೂ ಫೋಟೋಗಳು ಚೆನ್ನಾಗಿ ಮೂಡಿ ಬಂದಿವೆ.

    ReplyDelete
    Replies
    1. ..ನಿಜ ನಿಜ.. ಥ್ಯಾಂಕ್ಸ್ ಫ್ರೆಂಡ್ :)

      Delete
  4. Savi, beautifully described with swt words. Wonderful place...
    Feeling sorry fr nt visit'g such a natural treasure..
    Tx fr info & pics

    ReplyDelete
  5. This comment has been removed by the author.

    ReplyDelete
    Replies
    1. ಥ್ಯಾಂಕ್ಸ್ ಗಿರಿ

      Delete